Friday, January 4, 2019

hiking song


ಸೂರ್ಯ ಕಣ್ಣಲ್ಲಿ ಕಣ್ಣಿಟ್ಟು ನೋಡ್ತಾಯಿದ್ದಾರೆ 
ಹುಲ್ಲು ಹಾಡ್ಹಾಡ್ತ ಜೂಗಾಡ್ತ ನಗುತಾಯಿದ್ದಾರೆ  ।। ।। 
ಏನೋ ಜಪವನು ಮಾಡ್ಕೊಂಡು 
ಮರಗಳು ಸುಮ್ಮನೆ ನಿಂತ್ಕೊಂಡು  (*)
ನಂಗೆ ಏನಾಗ್ತಾಯ್ದೆ ಅಂತ ಗೊತ್ತೇ ಇಲ್ಲ 
ಆದ್ರೆ ಮನೇಗ್ಹೊಗೋ ದಾರಿನ ಮರ್ತೆ ಇಲ್ಲ      ।। ಅಪ ।।

ಹಸಿರೆಲೆಗಳಿಂದ 
ಉಸಿರಾನುಬಂಧ
ಕಾಲ್ಜಾರಿ ಬಿದ್ದಾಗ 
ಕೇಸರಿನಾನಂದ 
ನನ್ನ ಸ್ಥಿತಿ ನೋಡಿ ಎರ್ಚಾಡಿ
  ನಗ್ತಾಯಿತ್ತು ಕೊಚ್ಚೆ  
ಈಗ ನನ್ನ್ ಅಂಡಮೇಲೆ 
  ಕಂದ್ಬಣ್ಣದ್ ಹಚ್ಚೆ!!     ।। ೧ ।।

ಮುಸ್ಸಂಜೆಯಾಯ್ತು 
ಭಯವು ಶುರುವಾಯ್ತು
ಇಲ್ಲೊಂದು ಕಾಡ್ಬೇಕು
ನಮ್ಮೆಡೆಗೆ ಬಂತು!!
ಓಡ್ಹೋಗಿ ಸೇರ್ಕೊಂಡ್ವಿ
 ಮನೆಯನ್ನು ಸದ್ಯ ।।
ಹೇಗಿತ್ತು ನಾವಿಬ್ರು
 ಬರೆದಂತ ಪದ್ಯ?        ।। ।।

 -- ಹೃದಯ್ & ವತ್ಸ 
   (೨೦೧೮-೧೨-೨೭ ರಂದು ಬೆಟ್ಟ-ಗುಡ್ಡಗಳನ್ನು 
   ಹತ್ತುವಾಗ ನಡೆದಂತ ಘಟನೆಗಳನ್ನು ಆಧಾರಿಸಿದ ಕವನ


No comments:

Post a Comment