Thursday, September 2, 2021

ಹೊಸಕವಿಯ ಕೊರಗು

 

ಹೊಸಕವಿಯ ಕೊರಗು 

ಕವನ ಕವನ

ಬರೆಯೋ ತವಕ

ಲೇಖನಿಗಾಗಿದೆ


ಮನದ ತುಡಿತ

ತಿಳಿಸೋ ತನಕ

                                ನೆಮ್ಮದಿ ಬಾರದೆ                     ।। ಪ ।। 


ಅದೆಂಥಾ ಆಸೆಯೇನೋ?

ಇದೊಂದು ಭಾಸವೇನು?


ಈ ನೂರಾರು ಆಲೋಚನೆಯಲಿ

                                   ಒಂದೂ ಕೂಡದೆ!!                  ।। ಅಪ।।


ಶಬ್ದಕೋಶ ಪದಬಳಕೆ ಕಾಯ್ಕಿಣಿಯರಂತೆ 

ಗೀಚಿ-ರಾಗ ನೀಡುವೆನು ಹಂಸಲೇಖರಂತೆ  

ಕುಡುಕರಿನ ಪೋಲಿತನ ಯೋಗರಾಜರಂತೆ 

ನಾಭಿಯಲಿ ದ್ರಾಕ್ಷಿಗಳು ರವಿಮಾಮನಂತೆ 


​ಏತಕೆ ಹೀಗೆ ನನಗೆ 

                    ಒಂದು ಸಾಲೂ ಮೂಡದೆ?

ಒಣಗುತಿರುವ ಮೆದುಳು-ಶಾಯಿ 

                                   ಹಗಲು-ಇರುಳು ಕಾಡಿದೆ!           ।।೧।। 


ಸಖ-ಸಖಿಯ ನಡುವಿನಲಿ ಪ್ರೇಮಗೀತೆ ಬೇಕೆ?

ಅನಿಸಿಕೆಯ ಹೇಳಿಕೆಗೆ ಛಂದಸ್ಸು ಸಾಕೆ?

ಗಿರಿಗಳನು ನದಿಗಳನು ಓಲೈಸುವುದೇಕೆ? 

ದೇಶಗಳ ಭಾಷೆಗಳ ಕೊಂಡಾಡಬೇಕೆ?


ಮೆಚ್ಚುಗೆಯ ಮತ್ತು ನನಗೆ 

   ಕ್ಷಣಿಕ ಸುಖದ ಬೇನೆ

ಅಂಜಿಕೆಯು ಮತ್ತಿನ್ನೇಕೆ...  

                             ನನ್ನ ಭಾವ ತಾನೇ??!              ।।೨।। 


 - ಶ್ರೀವತ್ಸ ಪ್ರಹಲ್ಲಾದ 

Wednesday, August 4, 2021

ದೇವರ್ರ್rap

ದೇವರ್ರ್rap


 ಚಿಕ್ಕೌನಾಗ್ಸಿರು ನನ್ನ ಚಿಕ್ಕೌನಾಗ್ಸಿರು

ಬೇನೆಯಲ್ಲಿ ಬೆಂದಾಗ್ ನನ್ನ buddyಯಾಗಿರು

ಮಾತಲ್ಲಿ ಇರು ನನ್ನ ಮನ್ಸಲ್ಲಿ ಇರು

ಮಾನಹೋಗೊ timeಅಲ್ ನನ್ನ ಚಡ್ಡಿಯಾಗಿರು

 

ದೊಡ್ಡೌನಾಗ್ತ ಬೆಡ್ಡಿದ್ದನ್ನಾವ್ ಓದ್ಬೇಕಂತೆ

ದುಡ್ಡ್ಹಿಂದೆ ಹುಚ್ನಾಯ್ ಹಾಗ್ನಾವ್ ಓಡ್ಬೇಕಂತೆ

ಅದ್-ಕೊಂಡ್ಕೊ ಇದ್-ಕಳ್ಕೊ ಮಾರಾಟದ್ ಸಂತೆ

ಕೊನೆಯಲ್ಲಿ ನಮ್ಗ್ಉಳಿಯೋದ್ ಅರ್ಥ್ವಿಲ್ಲದ್ ಚಿಂತೆ

 

ಯಾಕ್ ದೇವ್ರು ನಮ್ಗ್ extra ಬುದ್ದಿ ಕೊಟ್ಟಿದ್ಯ?

ಅದ್ರಷ್ಟೂ ಅತಿಯಾಸೆ ಲದ್ದಿ ತುಂಬಿದ್ಯ

ಮನ್ಷನ್ಗೆ ಮಿತಿಯಿಲ್ಲ ಅಂತ ತಿಳಿದಿದ್ಯ?

ಅಮ್ಮನ್ ಗರ್ಭ super ಇತ್ತು ವಾಪಸ್ ಕಳ್ಸ್ತೀಯ?

 

ಕನ್ಸು brightಟಾಗಿದ್ರು ಕಣ್ಣಲ್ ಕಾಣೊದೆಲ್ಲ ಕತ್ತಲೆ

ಡೋಂಗಿ ಜೀವ್ನ ಬೇಡ ನಂಗ್-ನೀನೇನು ಅಂತ ಗೊತ್ತೊಲೇ

ಬಂದಿದ್ ಹೆಂಗೊ ಹೋಗೋದ್ ಹಂಗೆ fullಲ್ಲು body ಬೆತ್ತಲೆ

gapಪಲ್ ಇರ್ಲಿ ಅಂತ ದೆವ್ರ್ನ ಮೂರು ಬಾರಿ ಸುತ್ತಲೇ

 

ಅಂಜಿಕೆ ಏನು? ಅಳುಕಿನ್ನೇನು?

ನೀರಲಿ ಇಳಿದರೆ ಚಳಿಮಳೆಯೇನು?

ಭಯಗಳು ಏನು? ಭ್ರಮೆಗಳು ಏನು?

ಗಾಳಿಲಿ ತೂರುವ ಬದುಕಿನ್ನೇನು?

 

ಸನಿಹಗಳೇನು? ವಿರಹಗಳೇನು?

ಸರಸವಿರಸಗಳ ಸರಿಸಮವೇನು?

ಬಂಧನವೇನುಸಂಬಂಧಗಳೇನು?

ನೀ-ಕೊಡು-ನಾ-ತೊಗೊ ಅನ್ನೋದ್ಜೀವನವೇನು?

 

ದಡ್ಡನಾಗ್ಸಿರು ನನ್ನ ಒಡ್ಡನಾಗ್ಸೀರು

ಅನ್ಸಿದ್ದನ್ನ ಅಸ್ಲಿಯಾಗೆ ಹೇಳ್ಸೊಹಾಗಿರು

ಕುರುಡನಾಗ್ಸೀರು ನನ್ನ ಕಿವ್ಡನಾಗ್ಸಿರು

ನೋವುನಗುಗಳಿಗೆಲ್ಲ ನನ್ನ ಕಲ್ಲನಾಗ್ಸೀರು

 

ಚಿಕ್ಕೌನಾಗ್ಸಿರು ನನ್ನ ಚಿಕ್ಕೌನಾಗ್ಸಿರು

ಬೇನೆಯಲ್ಲಿ ಬೆಂದಾಗ್ ನನ್ನ buddyಯಾಗಿರು

ಮಾತಲ್ಲಿ ಇರು ನನ್ನ ಮನ್ಸಲ್ಲಿ ಇರು

ಮಾನಹೋಗೊ timeಅಲ್ ನನ್ನ ಚಡ್ಡಿಯಾಗಿರು

 

ಕನ್ಸು brightಟಾಗಿದ್ರು ಕಣ್ಣಲ್ ಕಾಣೊದೆಲ್ಲ ಕತ್ತಲೆ

ಡೋಂಗಿ ಜೀವ್ನ ಬೇಡ ನಂಗ್-ನೀನೇನು ಅಂತ ಗೊತ್ತೊಲೇ

ಬಂದಿದ್ ಹೆಂಗೊ ಹೋಗೋದ್ ಹಂಗೆ fullಲ್ಲು body ಬೆತ್ತಲೆ

gapಪಲ್ ಇರ್ಲಿ ಅಂತ ದೆವ್ರ್ನ ಮೂರು ಬಾರಿ ಸುತ್ತಲೇ

 

- ಶ್ರೀವತ್ಸ ಪ್ರಹಲ್ಲಾದ

Sunday, October 18, 2020

First, Bench-Love!


ಮಸಿಯಲ್ಲಿ ಹಸಿಯಾದ ಭಾವದ ಕಡಲು
ಗೀಚುತ್ತ ಕುಳಿತಿದ್ದೆ ಎದುರಲಿ ಅವಳು
ನಡುಗುತ್ತ-ತೊದಲುತ್ತ ಅವಳ ನಗೆಗೆ
ನನ್ನನ್ನೇ ನಾಮರೆತೇನಾಗಿದೆ ನನಗೆ?

ನಾಬರೆದ ಸಾಲನ್ನೇ ಅವಳೂ ಬರೆದು
ಕಲ್ಪನೆಯ ಕಾಗದದ ಮೇಲೆ ಕೊರೆದು
ಕೈಗಳು ಸೋಕಿ ಆದ ಮೊದಲ ಸ್ಪರ್ಶ!
ಮುಖಭಾವನೆ ಬದಲಿಸದೆ ಎದೆಯಲಿ ಹರ್ಷ !!

ನಿದಿರೆಗೂ ಅರಿವುಂಟು ತಡಿಯುತಲಿತ್ತು
ನಾಹೇಳದ ಮಾತುಗಳೆದೆ ನುಡಿಯುತಲಿತ್ತು
ಅವಳೊಡನೆ ಕಲ್ಯಾಣದ ಕಂಡ ಕನಸು
ಶಾಲೆಯೇ ಮಂಟಪವಾಗಿತ್ತು ಎಂಥ ಸೊಗಸು!

ನನ ಪ್ರೀತಿಯ ಪ್ರಸ್ತಾಪವು ಮಾಡಲು ಇಷ್ಟ
'ಉಹೂಂ' ಅನ್ನಲು ನನ್ನ ಬದುಕು ಕಷ್ಟ 
'ಹೂಂ' ಅಂದರು ತಿಳಿದಿಲ್ಲ ಏನ್ಮಾಡುವುದಂತ?
ಇರಲಿ ಬಿಡು ಹೀಗೇನೆ ನನ ರಾದ್ಧಾಂತ!! 😀

-ಶ್ರೀವತ್ಸ ಪ್ರಹಲ್ಲಾದ

 

Thursday, January 17, 2019

ಆ ದಿನಗಳು (summer of 69)

** ಆ ದಿನಗಳು **

ಮೂಗ್ ತುಂಬ ತುಂಬ್ಕೊಂಡಿದ್ರು 
ಕರ್ಚೀಫು ಕೈಲಿಲ್ಲಾ 
ಮಣ್ಣಲ್ಲಿ ಆಡ್ಕೊಂಡಿದ್ರೆ 
ಸ್ಲೇಟ್-ಬಳ್ಪ ಕೊಟ್ರಲ್ಲಾ

ಕತ್ತಿಗೆ ಟೈ ನೇತಾಕಿ 
ಬೆನ್ಗ್-ಬ್ಯಾಗ್ನ ಇಟ್ರಲ್ಲಾ 
ಶೂ-ಸೊಕ್ಸ್ನ ಕಾಲ್ಗ್ ಮೆತ್ತಾಕಿ       
ಸ್ಕೂಲಲ್ಲಿ ತುಂಬ್ದ್ರಲ್ಲಾ 

ನನ್ನಂತೆ ಇವ್ರೆಲ್ಲಾ 
ಶಾಲೆಗೆ ನಡೆದು ಬಂದ್ರು
ಇವ್ರಲ್ಲಿ ಬೆರ್ತಾಗ
ಸ್ವರ್ಗನೇ ಧರೆಗೆ ತಂದ್ರು 
Those were the best days of my life 

ಮೂಗ್ ತುಂಬ ತುಂಬ್ಕೊಂಡಿದ್ರು 
ಕರ್ಚೀಫು ಕೈಲಿಲ್ಲಾ
ಶೂ-ಸೊಕ್ಸ್ನ ಕಾಲ್ಗ್ ಮೆತ್ತಾಕಿ       
ಸ್ಕೂಲಲ್ಲಿ ತುಂಬ್ದ್ರಲ್ಲಾ 
  
ನನ್ನಂತೆ ಇವ್ರೆಲ್ಲಾ 
ಶಾಲೆಗೆ ನಡೆದು ಬಂದ್ರು
ಇವ್ರಲ್ಲಿ ಬೆರ್ತಾಗ
ಸ್ವರ್ಗನೇ ಧರೆಗೆ ತಂದ್ರು 
Those were the best days of my life 

Wednesdays mass-P.T. ಡ್ರಿಲ್ಲು 
white-dressನಲ್ ನಾವೆಲ್ಲಾ 
ಪಿ.ಟಿ.ಸರ್ ಸೀಟಿಗೆ ಸ್ಟಿಲ್ಲು 
ಸಾವ್ಧಾನು  ಆದ್ವಲ್ಲಾ 

ಮಾಡಿದ ತಪ್ಪಿಗೆ
kneel-downನು ಮಾಡ್ದ್ವಿ ನಾವು 
ಆದ್ರೂನು ಸ್ಕೂಲಲ್ಲಿ 
ಮರ್ತೇವು ನಮ್ಮ ನೋವು
 
Those were the best days of my life   
ಇವತ್ಗು ಮಾಡತ್ತೆ smile-and-shine!
ಆ ದಿನಗಳು, ಆ ದಿನಗಳು...ಆ ದಿನಗಳು  

Singer: Jitendra Magaji
Writer: Shrivatsa Prahallada  
Original track: Summer of 69
Language: Kannada
Audio track: https://soundcloud.com/garikedari/aa-dinagalu-kannada