Sunday, October 18, 2020

First, Bench-Love!


ಮಸಿಯಲ್ಲಿ ಹಸಿಯಾದ ಭಾವದ ಕಡಲು
ಗೀಚುತ್ತ ಕುಳಿತಿದ್ದೆ ಎದುರಲಿ ಅವಳು
ನಡುಗುತ್ತ-ತೊದಲುತ್ತ ಅವಳ ನಗೆಗೆ
ನನ್ನನ್ನೇ ನಾಮರೆತೇನಾಗಿದೆ ನನಗೆ?

ನಾಬರೆದ ಸಾಲನ್ನೇ ಅವಳೂ ಬರೆದು
ಕಲ್ಪನೆಯ ಕಾಗದದ ಮೇಲೆ ಕೊರೆದು
ಕೈಗಳು ಸೋಕಿ ಆದ ಮೊದಲ ಸ್ಪರ್ಶ!
ಮುಖಭಾವನೆ ಬದಲಿಸದೆ ಎದೆಯಲಿ ಹರ್ಷ !!

ನಿದಿರೆಗೂ ಅರಿವುಂಟು ತಡಿಯುತಲಿತ್ತು
ನಾಹೇಳದ ಮಾತುಗಳೆದೆ ನುಡಿಯುತಲಿತ್ತು
ಅವಳೊಡನೆ ಕಲ್ಯಾಣದ ಕಂಡ ಕನಸು
ಶಾಲೆಯೇ ಮಂಟಪವಾಗಿತ್ತು ಎಂಥ ಸೊಗಸು!

ನನ ಪ್ರೀತಿಯ ಪ್ರಸ್ತಾಪವು ಮಾಡಲು ಇಷ್ಟ
'ಉಹೂಂ' ಅನ್ನಲು ನನ್ನ ಬದುಕು ಕಷ್ಟ 
'ಹೂಂ' ಅಂದರು ತಿಳಿದಿಲ್ಲ ಏನ್ಮಾಡುವುದಂತ?
ಇರಲಿ ಬಿಡು ಹೀಗೇನೆ ನನ ರಾದ್ಧಾಂತ!! 😀

-ಶ್ರೀವತ್ಸ ಪ್ರಹಲ್ಲಾದ